ಮಂಗಳವಾರ, ಏಪ್ರಿಲ್ 29, 2014

ಒಲ್ಲದ ಹುಡುಗನಿಗೊಂದು ಒಲುಮೆಯ ಪತ್ರ ...

ಪುಟ್ಟಾ,

ಎಷ್ಟು ನೋವಾಗ್ತಿದೆ ಗೊತ್ತೇನೋ?ಯಾಕೋ ಹೀಗೆ ಮಾಡ್ತಿದಿಯಾ?ಈ ಥರ ನೋವು ಕೊಡೋದರ ಬದಲು ದೂರ ಹೋಗು ಅಂತ ಒಂದು ಮಾತು ಹೇಳಿಬಿಡೋ .ಜೀವ ಇರೋತನಕ ನಿನ್ನ ಕಣ್ಣಿಗೆ ಕಾಣಿಸದ ಹಾಗೆ  ಹೊರಟು ಹೋಗ್ತೀನಿ.ನಿನ್ನ ಜೀವನದಲ್ಲಿ ನಾನು ಮೊದಲ ಹುಡುಗಿ ಅಲ್ಲದೇ ಇರಬಹುದು.ಆದರೆ ನೀನು, ನಾ ಹೃದಯ ಕೊಟ್ಟು ಹಚ್ಚಿಕೊಂಡಿರೋ ಮೊದಲ ಹುಡುಗಾ ಕಣೋ .ಪ್ರೀತಿಯ ಜಗತ್ತಿಗೆ ಈಗ ತಾನೇ ಕಾಲಿಟ್ಟಿರೋ ಪುಟ್ಟ ಹೃದಯ ಕಣೋ ನಂದು.ಕಣ್ಣಲ್ಲಿ ಬಣ್ಣ ಬಣ್ಣದ ಕನಸುಗಳನ್ನ ಕಟ್ಟಿಕೊಂಡು ಬಂದೆ.ಕಣ್ಣೀರಲ್ಲೇ ಎಲ್ಲಾ ಕನಸುಗಳೂ ಕೊಚ್ಚಿಕೊಂಡು ಹೋಗೋ ಹಾಗೆ ಮಾಡ್ಬಿಟ್ಟೆ. ಅಮ್ಮನ ಎದೆಹಾಲಿನ ಸಿಹಿ ಮಾತ್ರ ಇರುತ್ತೆ ಪ್ರೀತೀಲಿ ಅಂತಾ ಅಂದ್ಕೊಂಡು ಬಂದೆ ಆದರೆ ಈಗಲೇ ಕಣೊ ಗೊತ್ತಾಗಿದ್ದು, ಮೊದಲ ಹೆರಿಗೆ ನೋವಿದು ಅಂತಾ. ಈಗಾಗ್ಲೇ ಎಷ್ಟೋ ಹುಡ್ಗೀರು ನಿನ್ನ ಬಿಟ್ಟು ಹೋಗಿರಬಹುದು,ಮೋಸ ಮಾಡಿರಬಹುದು.ಆದರೆ ಅವರ ತಪ್ಪಿಗೆ ನಂಗ್ಯಾಕೋ ಶಿಕ್ಷೆ  ಕೊಡ್ತಿದಿಯಾ? ಅವರಿಗೆಲ್ಲಾ ನಿನ್ನ ಮುಗ್ಧ ಪ್ರೀತಿ ಕೊಟ್ಟು ನಂಜೊತೆ ಯಾಕೋ ಹೀಗೆ ನಡ್ಕೋತಿದಿಯಾ?ನಂಗೊತ್ತು ಪ್ರೀತಿ ಮೇಲೆ ವಿಶ್ವಾಸ ಇಲ್ಲ ನಿನಗೆ.. ಆದ್ರೆ ನನ್ನನ್ಯಾಕೋ ಮತ್ತೆ ಹಿಂದೆ ಬಿದ್ದು ಪ್ರೀತಿಸಿದ್ದು? ಯಾಕೋ ಇಷ್ಟಪಟ್ಟಿದ್ದು?ಈಗ ನಾನು ನಿನ್ನ ಪ್ರೀತಿನ ಒಪ್ಗೊಂಡು ನೀ ಹೇಳಿದ್ನೆಲ್ಲಾ ಕೇಳಿದ್ರೂ ಯಾಕೋ ಹೀಗೆ ನೋವು ಕೊಡ್ತಿದೀಯಾ?please ಪುಟ್ಟಾ,ಇರೋದೊಂದು ಪುಟ್ಟ ಜೀವ. ಆ ಜೀವಕ್ಕೆ ಜೀವ ಕೊಡು ಅಂತ ಕೇಳಲ್ಲ. ಒಂದ್ಹಿಡಿ ಪ್ರೀತಿ ಕೊಡೋ ಸಾಕು.ನಿನ್ನ ಎದೆ ಗೂಡಲ್ಲಿ, ನಿನ್ನ ತೋಳಲ್ಲಿ ಒಂಚೂರು ಜಾಗ ಕೊಡೋ. ಹಾಗೆ ಕಣ್ಮುಚ್ಬಿಡ್ತೀನಿ ಶಾಶ್ವತವಾಗಿ...  

ಪ್ರೀತಿಲಿ ಮರುಳಾದ ಹುಡುಗಿಯಿಂದ,

ಪ್ರೀತಿಸಿ ಮರೆತಿರೋ ಹುಡುಗನಿಗೆ...